    ಮೂಲದೊಡನೆ ಪರಿಶೀಲಿಸಿ

ಕಾಂತೀಯ ವಿರಾಮಗಾಮಿತ್ವ

ಒಂದು ಕಾಂತ ವ್ಯವಸ್ಥೆ ಪ್ರಯುಕ್ತ ಕಾಂತಕ್ಷೇತ್ರದಲ್ಲಿ ಸಮತೋಲ ಸ್ಥಿತಿಗೆ ಬರುವ ಪ್ರಕ್ರಿಯೆ (ಮ್ಯಾಗ್ನೆಟಿಕ್ ರಿಲ್ಯಾಕ್ಸೇಷನ್). ಒಂದು ಅನುಕಾಂತೀಯ ವಸ್ತುವಿನ ಮೇಲೆ ಹೊರಗಿನ ಕಾಂತಕ್ಷೇತ್ರವನ್ನು ಪ್ರಯೋಗಿಸಿದಾಗ ಅಡ್ಡಾದಿಡ್ಡಿಯಾಗಿದ್ದ ಕಾಂತ ದ್ವಿಧ್ರುವಗಳು (ಡೈಪೋಲ್ಸ್) ಕ್ಷೇತ್ರದ ದಿಶೆಯತ್ತ ವಾಲುತ್ತವೆ. ಇದರಿಂದ ವಸ್ತು ಕಾಂತೀಕರಣಗೊಳ್ಳತ್ತದೆ. ಈ ಕಾಂತೀಕರಣ ಸಮತೋಲಪರಿಮಾಣವನ್ನು ಹೊಂದಲು ಸ್ವಲ್ಪ ಕಾಲ ಬೇಕು. ಈ ಕಾಲಕ್ಕೆ ವಿರಾಮ ಗಾಮಿತ್ವ ಕಾಲ (ರಿಲ್ಯಾಕ್ಸೇಷನ್ ಟೈಂ) ಎಂದು ಹೆಸರು. ಶಕ್ತಿ ಅಥವಾ ಚಲನೆಗೆ ಸಂಬಂಧಿಸಿದಂತೆ ಚಾಲಕ ಶಕ್ತಿಯನ್ನು ಕ್ರಮೇಣ ಕಳೆದುಕೊಂಡು ನಿಲ್ಲುವ ಸ್ಥಿತಿಗೆ ಶ್ರಾಂತಿ (ರಿಲಾಕ್ಸ್) ಎಂದೂ, ತೆಗೆದುಕೊಳ್ಳುವ ಅವಧಿಗೆ ಶ್ರಾಂತಿಕಾಲ ಅಥವಾ ವಿರಾಮಗಾಮಿತ್ವ ಕಾಲ ಎನ್ನುತ್ತೇವೆ. ದ್ವಿಧ್ರುವಗಳು ಸ್ವತಂತ್ರವಾಗಿದ್ದರೆ ಅವು ಪ್ರಯುಕ್ತ ಕ್ಷೇತ್ರದ ದಿಶೆಯನ್ನು ಕುರಿತು ಆವರ್ತಚಲನೆಯಲ್ಲಿರುತ್ತವೆ (ಪ್ರಿಸೆಸ್). ಆಗ ಮಾದರಿಯಲ್ಲಿ ಕಾಂತೀಕರಣ ಉಂಟಾಗುವುದಿಲ್ಲ.  ಕಾಂತ ಸಂವೇಗ (ಮೊಮೆಂಟಂ) ಇರುವ ಒಂದು ದ್ವಿಧ್ರುವವು ಊ ತೀವ್ರತೆಯಿಂದ ಕಾಂತಕ್ಷೇತ್ರದಲ್ಲಿ ವಿಮುಖ ದಿಶೆಯಿಂದ ಸಮುಖ ದಿಶೆಗೆ ತಿರುಗಿದರೆ 2ಊ ಶಕ್ತಿ ಬಿಡುಗಡೆಯಾಗುತ್ತದೆ. ಹೀಗೆ ಬಿಡುಗಡೆಯಾದ ಶಕ್ತಿಯ ವಿನಿಮಯಕ್ಕೆ ಅವಕಾಶವಿರಬೇಕು. ಇಲ್ಲದಿದ್ದರೆ ಕಾಂತೀಕರಣ ಪ್ರಕ್ರಿಯೆ ನಡೆಯುವುದಿಲ್ಲ.

 ಅನುಕಾಂತೀಯ (ಪ್ಯಾರಾಮ್ಯಾಗ್ನೆಟಿಕ್) ವಸ್ತುಗಳಲ್ಲಿ ಪ್ರತಿಯೊಂದು ಧ್ವಿಧ್ರುವವೂ ಪಕ್ಕದ ದ್ವಿಧ್ರುವಗಳಿಂದ ಜನಿಸಿದ ಅಸ್ಥಿರವಾದ ಕಾಂತಕ್ಷೇತ್ರದಲ್ಲಿರುತ್ತದೆ. ಈ ಅಸ್ತಿರವಾದ ಕ್ಷೇತ್ರದ ತೀವ್ರತೆ ಊi ಎಂದಿಟ್ಟುಕೊಂಡರೆ ಎರಡು ರೀತಿಯ ಸನ್ನಿವೇಶಗಳನ್ನು ಕಾಣಬಹುದು: 1 ಪ್ರಯುಕ್ತ ಕ್ಷೇತ್ರದ ತೀವ್ರತೆ ಊಛಿ>>ಊi ಆಗಿರುವಂಥದು; 2 ಪ್ರಯುಕ್ತ ಕ್ಷೇತ್ರದ ತೀವ್ರತೆ ಊಛಿ<<ಊi ಆಗಿರುವಂಥದು. ಈ ಎರಡು ಸಂದರ್ಭಗಳಲ್ಲಿ ನಡೆಯುವ ಕಾಂತೀಕರಣ ಪ್ರಕ್ರಿಯೆಗಳು ಬೇರೆಬೇರೆಯಾಗಿರುತ್ತವೆ.

 ಊಛಿ>>ಊi ಆದಾಗ ದ್ವಿಧ್ರುವಗಳು ನೋಡುವ ಕ್ಷೇತ್ರದ ದಿಶೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಊಛಿ ಹೆಚ್ಚಾದಂತೆ ದ್ವಿಧ್ರುವಗಳು ವಿಮುಖ ದಿಶೆಯಿಂದ ಸಮುಖದಿಶೆಗೆ ಚಿಮ್ಮುವುದರಿಂದ ಕಾಂತೀಕರಣ ಉಂಟಾಗುತ್ತದೆ. ಈಗ ಬಿಡುಗಡೆಯಾಗುವ ಶಕ್ತಿ ಲ್ಯಾಟಿಸ್ಸಿನೊಂದಿಗೆ ವಿನಿಮಯವಾಗುತ್ತದೆ. ಇದು ನಡೆಯುವಾಗ ಕಾಂತವ್ಯವಸ್ಥೆ ಸಮತೋಲ ಸ್ಥಿತಿಗೆ ಬರುವ ಪ್ರಕ್ರಿಯೆಯನ್ನು ಸ್ಟಿನ್-ಲ್ಯಾಟಿಸ್ ವಿರಾಮಗಾಮಿತ್ವ ಎಂದು ಕರೆಯುತ್ತೇವೆ.

 ಊಛಿ<<ಊi ಆದಾಗ ದ್ವಿಧ್ರುವಗಳು ನೋಡುವ ಕ್ಷೇತ್ರದ ದಿಶೆಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ದ್ವಿಧ್ರುವಗಳು ಈ ದಿಶೆಯನ್ನು ಕುರಿತು ಆವರ್ತಿಸುತ್ತವೆ. ತತ್ಪರಿಣಾಮವಾಗಿ ಕಾಂತೀಕರಣ ಉಂಟಾಗುತ್ತದೆ. ಈಗ ಸ್ಟಿನ್ ಮತ್ತು ಲ್ಯಾಟಿಸ್ಸಿನ ನಡುವೆ ಶಕ್ತಿ ವಿನಿಮಯವಾಗಬೇಕಿಲ್ಲ. ಸ್ಟಿನ್ ಮತ್ತು ಕ್ಷೇತ್ರಗಳ ನಡುವೆ ಶಕ್ತಿವಿನಿಮಯ ನಡೆಯುತ್ತದೆ. ಶಕ್ತಿವಿನಿಮಯವಾಗುವಾಗ ಕಾಂತವ್ಯವಸ್ಥೆ ಸಮತೋಲ ಸ್ಥಿತಿಗೆ ಬರುವ ಪ್ರಕ್ರಿಯೆಯನ್ನು ಸ್ಟಿನ್-ಸ್ಟಿನ್ ವಿರಾಮಗಾಮಿತ್ತವೆಂದು ಕರೆಯುತ್ತೇವೆ. ಸ್ಪಿನ್-ಸ್ಪಿನ್ ವಿರಾಮಗಾಮಿತ್ವ ಕಾಲ ಸ್ಟಿನ್-ಲ್ಯಾಟಿಸ್ ವಿರಾಮಗಾಮಿತ್ವ ಕಾಲಕ್ಕಿಂತ ಬಹಳ ಕಮ್ಮಿ.

 ಫೆರೋಕಾಂತ ವಿರಾಮಗಾಮಿತ್ವ: ಸಮಾಂತರವಾಗಿಯೇ ಇರಲು ಪ್ರಬಲವಾದ ಒಲವನ್ನು ಹೊಂದಿರುವ ಫೆರೋಕಾಂತ ಸ್ಪಿನ್ನುಗಳು ಎರಡು ಬಗೆಯ ವಿರಾಮಗಾಮಿತ್ವವನ್ನು ವಿಂಗಡಿಸಲು ನೆರವಾಗುತ್ತವೆ:  1 ವಿನಿಮಯಶಕ್ತಿ ನಿಯತವಾಗಿಯೇ ಇರುವಂತೆ ಒಟ್ಟು ಕಾಂತೀಕರಣದ ದಿಶೆ ಬದಲಾಯಿಸುವುದು; 2 ವಿನಿಮಯಶಕ್ತಿಯಲ್ಲಿ ಬದಲವಾಣೆಯಾಗುವಂತೆ ಕಾಂತೀಕರಣದ ಪರಿಮಾಣದಲ್ಲಿ ವ್ಯತ್ಯಾಸವಾಗುವುದು. ಎರಡನೆಯದು ಮಾದರಿಯ ಆಕಾರ ಮತ್ತು ಫೆರೋಕಾಂತ ಲ್ಯಾಟಿಸ್ಸುಗಳಲ್ಲಿರುವ ದೋಷಗಳನ್ನು ಅವಲಂಬಿಸಿದೆ. ಸ್ಫಟಿಕಗಳಲ್ಲಿ ಪರಮಾಣುಗಳ, ಅಯಾನ್‍ಗಳ ಅಥವಾ ಅಣುಗಳ ಕ್ರಮಬದ್ಧ ಆವರ್ತನೀಯ ವ್ಯವಸ್ಥೆಗೆ ಚಾಲಕ ಅಥವಾ ಲ್ಯಾಟಿಸ್ ಎಂದು ಕರೆಯುತ್ತಾರೆ. 

                                                                             (ಎಸ್.ಎ.ಎಚ್.)

(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ